ಬೀದರ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ 75ನೇ ಹುಟ್ಟುಹಬ್ಬವನ್ನು ಬೀದರ್‌ನಲ್ಲಿ ಬಿಜೆಪಿ ಮುಖಂಡರು ಅದ್ಧೂರಿಯಾಗಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ವೈ, ರಾಹುಲ್ ಗಾಂಧಿ ರೈತರಿಗೆ ಕಣ್ಣು ತಪ್ಪಿಸಿ ಓಡಿಹೋಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮಹದಾಯಿ ವಿವಾದಕ್ಕೆ ಸಂಪೂರ್ಣ ಅಂತ್ಯ ಹಾಡಲಾಗುವುದು. ಮಹಾದಾಯಿ ವಿವಾದಕ್ಕೆ ಅಂತ್ಯ ಹಾಡುವುದಕ್ಕೋಸ್ಕರ ನಾನು ಸತತ ಪ್ರಯತ್ನ ಮಾಡುತ್ತಿದ್ದೇನೆ. ಮುಂದೆ ಆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ದಾವಣಗೆರೆಗೆ ಇಂದು ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ರೈತ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ತಿಳಿಸಿದರು.



Post a Comment