ಅಂಗಡಿ ಮುಂದೆ ನಿಂತಿದ್ದವನ ಮೇಲೆ ಹರಿದ ಲಾರಿ ಹಾಯ್ದು ಯುವಕ ಸ್ಥಳದಲ್ಲೇ ಸಾವು

ಮೈಸೂರು: ಅಂಗಡಿ ಮುಂದೆ ತನ್ನ ಬೈಕ್‌ನೊಂದಿಗೆ ನಿಂತಿದ್ದ ಯುವಕನ ಮೇಲೆ ನಿಯಂತ್ರಣ ಕಳೆದುಕೊಂಡು ಬಂದ ಲಾರಿ ಆತನ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನಡೆದಿದೆ.


ಗ್ರಾಮದ ಮುಖ್ಯ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಆಂಧ್ರ ಪ್ರದೇಶ ಮೂಲದ ಲಾರಿಯೊಂದು, ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಂಗಡಿ‌ ಮುಂದೆ ಬೈಕ್‌ನೊಂದಿಗೆ ನಿಂತಿದ್ದ ಕರಿಯನ‌ ಮೇಲೆ ಹರಿದಿದೆ. ಈ ವೇಳೆ ಚಕ್ರಕ್ಕೆ ಸಿಲುಕಿ ಕರಿಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೆ, ಗ್ರಾಮದ ರಸ್ತೆಯಲ್ಲಿದ್ದ ವಿದ್ಯುತ್ ಕಂಬಗಳು ಜಖಂಗೊಂಡಿವೆ.

1 comment :

Distributed by Presul Info Tech

Distributed by Gooyaabi Templates | Designed by Presul Info Tech