ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಫೇಸಬುಕ್, ಟ್ವೀಟರ್, ವಾಟ್ಸ್ ಅಪ್ ಸೇರಿ ಹಲವು ಮಾಧ್ಯಮಗಳ ಮೂಲಕ
ಜನರೊಂದಿಗೆ ಸಂವಹನ ನಡೆಸುತ್ತಾರೆ. ಅಷ್ಟಾದರೂ ಸಂಪರ್ಕಕ್ಕೆ ಸಿಗುವವರೆಗೆ ಬೆರಳಣಿಕೆಯಷ್ಟು.
ಆದರೆ ಇಲ್ಲೊಬ್ಬ ಪತ್ರದ (ಪೋಸ್ಟಕಾರ್ಡ್) ಮೂಲಕವೇ ದೇಶದ 50 ಲಕ್ಷ ಜನರ ಸಂವಹನ ಸಾಧಿಸಿದ್ದಾರೆ. ಅವರೇ ಪುಣೆ ಮೂಲದ ಪ್ರದೀಪ ಲೋಖಡೆ.
ಪುಣೆಯಲ್ಲಿ ರೂರಲ್ ರಿಲೆಷನ್ಸ್ ಸಂಸ್ಥೆ ಹುಟ್ಟುಹಾಕಿರುವ ಪ್ರದೀಪ ಅದರ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಇದು ಇ-ಮೇಲ್ ವಿಳಾಸಕ್ಕೆ ಹೆಚ್ಚು ಸಂದೇಶ ಕಳುಹಿಸಿದರೆ ಹಲವರು ಪ್ರತಿಕ್ರಿಯೆ ನೀಡುವುದಿಲ್ಲ. ಅಂತಹ ಸ್ಥಿತಿಯಲ್ಲಿ ಪತ್ರ ಬರೆದು, ಜನರಿಂದ ಪ್ರತಿಕ್ರಿಯೆ ಪಡೆಯುತ್ತಿರುವ ಪ್ರದೀಶ ರೋಖಡೆ ಅವರ ಕಾರ್ಯ ಮೆಚ್ಚುವಂತದ್ದು.
ಸದ್ಯ ದೇಶದ 10 ರಾಜ್ಯದ 49,000 ಗ್ರಾಮಗಳ ಜನರೊಂದಿಗೆ ಸಂಪರ್ಕದಲ್ಲಿರುವ ಪ್ರದೀಪ, ವಿವಿಧ ಸಮಸ್ಯೆ ಹಾಗೂ ಇತರೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಕನಿಷ್ಠ 150 ಪತ್ರಗಳನ್ನು ಪಡೆಯುತ್ತಾರೆ. ಪೋಸ್ಟಮನಗಳು ಆತನ ಸ್ನೇಹಿತರಾಗಿ ಮಾರ್ಪಟ್ಟಿದ್ದು, ಪ್ರತಿನಿತ್ಯವೂ ಅವರ ಮನೆಗೆ ಹೋಗುವುದೇ ಅವರ ಕೆಲಸವಾಗಿಬಿಟ್ಟಿದೆ.
ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ:
1996ರಲ್ಲಿ ಗ್ರಾಮೀಣ ಸಂಬಂಧ ಸಂಸ್ಥೆ (ರೂರಲ್ ರಿಲೆಷನ್ಸ್ ಸಂಸ್ಥೆ) ಹುಟ್ಟುಹಾಕಿದ ಪ್ರದೀಪ, ಗ್ರಾಮೀಣ ಜನರೊಂದಿಗೆ ಸಂಪರ್ಕ ಸಾಧಿಸಿ ಅವರ ಸಮಸ್ಯೆ ಆಲಿಸಿ, ಅವರಿಗಿರುವ ಸರ್ಕಾರದ ಸೌಲಭ್ಯ ತಿಳಿಸುವ ಕೆಲಸಕ್ಕೆ ಕೈ ಹಾಕಿದ್ದರು.
ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸಗಢ್, ಗುಜರಾತ್, ರಾಜಸ್ತಾನ್, ಉತ್ತರ ಪ್ರದೇಶ, ಉತ್ತಾರಾಖಂಡ, ಆಂಧ್ರಪ್ರದೇಶ ಸೇರಿ 10 ರಾಜ್ಯಗಳ ಗ್ರಾಮಗಳಲ್ಲಿ ಸಂಚಾರ ಆರಂಭಿಸಿದರು.
ಗ್ರಾಮದ ಶಾಲೆ, ಮನೆಗಳಿಗೆ ಭೇಟಿ ನೀಡಿ ಪತ್ರದ ಕುರಿತು ಜಾಗೃತಿ ಮೂಡಿಸಿದರು. ಗ್ರಾಮದ ಸಮಸ್ಯೆಗಳನ್ನು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸುವ ಬಗೆಯನ್ನು ವಿವರಿಸಿದರು. ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದ ಶಾಲಾ ವಿದ್ಯಾರ್ಥಿಗಳನ್ನು ಪತ್ರ ಬರೆಯಲು ಸಿದ್ಧಗೊಳಿಸಿದರು. ಗ್ರಾಮಸ್ಥರಲ್ಲಿ ಓದು ಗೊತ್ತಿಲ್ಲದವರ ವಿದ್ಯಾರ್ಥಿಗಳ ಸಹಾಯದಿಂದ ಇಂದು ಪ್ರದೀಪ ರೋಖಡೆ ಅವರಿಗೆ ಪತ್ರ ಬರೆದು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ 100 ಮಕ್ಕಳು ಪತ್ರ ಬರೆದರೆ, ಉಳಿದವರು ಯುವಕರು, ಹಿರಿಯರು.
ಆರ್ಥಿಕ ಪರಿಸ್ಥಿತಿ ಸುಧಾರಣೆ:
ಗ್ರಾಮದ ಸಮಸ್ಯೆ ತಿಳಿದುಕೊಳ್ಳುವುದಷ್ಟೇ ಅಲ್ಲದೇ ಅದರ ಪರಿಹಾರಕ್ಕೆ ಪ್ರದೀಪ ರೋಖಡೆ ಮುಂದಾಗಿದ್ದಾರೆ. ದೊಡ್ಡ ಕಂಪನಿ ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿ, ಅವರ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗ್ರಾಮದ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿ ಇತರೆ ಎಲ್ಲ ಆಯಾಮಗಳ ಸಮಸ್ಯೆ ಕಂಡಿರುವ ಅವರು, ಪ್ರತಿ ಸಮಸ್ಯೆಗೂ ಶಾಶ್ವತ ಪರಿಹಾರಕ್ಕೆ ಗಮನ ಹರಿಸಿದ್ದಾರೆ. ಅವರ ಗ್ರಾಮೀಣ ಅಭಿವೃದ್ಧಿ ಕೆಲಸಕ್ಕೆ ಯಶಸ್ಸು ದೊರೆಯಲಿ ಎಂದು ನಾವೆಲ್ಲರೂ ಹಾರೈಸೋಣ.




Post a Comment