ತಾಯಿ ಅಂದ್ರೆ ದೇವರ ಸಮಾನ. ತಾಯಿಯೇ ಮಗುವಿನ ಮೊದಲ ಗುರು. ಇಂತಹ ತಾಯಿಗೆ ಜನ್ಮ ನೀಡಿದ ಪ್ರತಿಯೊಂದು ಮಗು ತಕ್ಷಣ ಕೃತಜ್ಞತೆ ಸಲ್ಲಿಸುತ್ತದೆ.
ಆದರೆ ಧಾರವಾಡ ಜಿಲ್ಲೆಯಲ್ಲಿ ಒಂದು ಕರುಣಾಜನಕ ಘಟನೆ ನಡೆದಿದೆ. ಗರ್ಭೀಣಿಯಾದ ಕೋತಿಯೊಂದು ಮರಿ ಕೋತಿಗೆ ಜನ್ಮ ನೀಡಿದ್ದದು, ಮರಿಯೂ ಕೆಲವೇ ಕ್ಷಣದಲ್ಲಿ ಮೃತಪಟ್ಟಿದೆ.
ತನ್ನ ಕರುಳ ಕುಡಿಯನ್ನು ಕಳೆದುಕೊಂಡ ತಾಯಿ ಕೋತಿ ಕಣ್ಣೀರು ಹಾಕಿ ರೋಧಿಸಿದ ಘಟನೆ ನೆರೆದಿದ್ದವರಲ್ಲಿ ಮನ ಕಲಕುವಂತಿತ್ತು.
ತಾಯಿ- ಮಕ್ಕಳ ಋಣಾನುಬಂಧವೇ ಅಂತಹದ್ದು. ಮಕ್ಕಳಿಗೆ ತಾಯಿ ಪ್ರೀತಿಯಾದ್ರೆ, ಹೆತ್ತ ತಾಯಿಗೆ ತನ್ನ ಮಕ್ಕಳು ಅಷ್ಟೇ ಪ್ರೀತಿ.
ನಡೆದದಿಷ್ಟು....
ಗರ್ಭೀಣಿಯಾಗಿದ್ದ ಕೋತಿಯೊಂದು ಮರದ ಮೇಲಿಂದ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿತ್ತು. ಅದನ್ನು ಕಂಡು ಸ್ಥಳೀಯ ಯುವಕ ಸುನೀಲ ಎಂಬಾತ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವೈದ್ಯ ಅನಿಲಕುಮಾರ ಪಾಟೀಲ್ ಹತ್ತಿರ ಚಿಕಿತ್ಸೆಗೆ ತೆಗೆದುಕೊಂಡು ಬಂದರು. ಸೂಕ್ತ ಸಮಯದಲ್ಲಿ ಚಿಕೆತ್ಸೆ ಮಾಡಿದ ವೈದ್ಯ ಗರ್ಭೀಣಿಯಾಗಿದ್ದ ಮಂಗಕ್ಕೆ ಪ್ರಸವ ಮಾಡಿದ್ರು. ಆದರೆ ವಿಪಾರ್ಯಾಸವೇನೊ ಗೊತ್ತಿಲ್ಲಾ. ಭೂಮಿ ಮೇಲೆ ಜನ್ಮ ತಾಳಿದ ಕೆಲವೇ ನಿಮಿಷಗಳಲ್ಲಿ ಮರಿ ಕೋತಿ ಇಹಲೋಕ ತ್ಯಜಿಸಿತು. ಆಗ ತಾಯಿ ಕೋತಿ ಕಣ್ಣಿರಿಡುತ್ತಿದ್ದುದ್ದು ಕಂಡುಬಂತು.
ತನ್ನ ಮರಿಯನ್ನು ನೋಡಿದ ತಾಯಿ ಕೋತಿ ಹೃದಯದ ತೋಳಲಾಟ ಎಷ್ಟಿತ್ತೆಂದ್ರೆ ಸುಮ್ಮನೇ ಮುಖವನ್ನು ಕೆಳಗೆ ಮಾಡಿಕೊಂಡು, ಕಣ್ಣೀರು ಹಾಕಿತು. ವೈದ್ಯರು ನನಗೆ ಚಿಕೆತ್ಸೆ ಮಾಡಿದ್ರೂ ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲಾ ಎಂದು ಒಂದೇ ಸಮನೇ ಕಣ್ಣೀರು ಹಾಕುತ್ತಾ, ಕುಳಿತಿತ್ತು. ಕ್ಯಾಮೆರಾ ಕಂಡೊಡನೆ ಮುಖದ ಮೇಲೆ ಕೈ ಇಟ್ಟುಕೊಂಡು, ದು:ಖಿಸಲು ಆರಂಭಿಸಿತ್ತು. ಇದನ್ನು ನೋಡಿದವರಿಗೂ ಮನಸ್ಸು ನೀರಾಯಿತು. ಎಷ್ಟೇ ಪ್ರಯತ್ನ ಮಾಡಿದ್ರೂ ಮರಿ ಕೋತಿಯನ್ನು ಉಳಿಸಲು ಆಗಲಿಲ್ಲಾ ಎಂದು ಸ್ಥಳೀಯ ಯುವಕ ಬೇಸರ ವ್ಯಕ್ತಪಡಿಸಿದನು.
------
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ....




Post a Comment