ನಟೋರಿಯಸ್‌ ಸೈಕೋ ಶಂಕರ್‌ ಜೈಲಿನಲ್ಲೇ ಆತ್ಮಹತ್ಯೆ

ಬೆಂಗಳೂರು: ಪರಪ್ಪನ ಅಗ್ರಹಾರ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿಯಾಗಿದ್ದ ವಿಕೃತ ಕಾಮಿ ಸೈಕೋ ಜಯಶಂಕರ್ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ರಾತ್ರಿ ಎರಡು ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಜೈಲಿನ ಸಿಬ್ಬಂದಿ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದರು. ಆದರೆ, ದಾರಿ ಮಧ್ಯೆ ಶಂಕರ್‌‌ ಮೃತಪಟ್ಟಿದ್ದಾನೆ.ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಕುಖ್ಯಾತಿ ಗಳಿಸಿದ್ದ ಈತ ಸಾಕಷ್ಟು ವರ್ಷಗಳಿಂದ ಜೈಲಿನಲ್ಲಿ ಸಜಾ ಕೈದಿಯಾಗಿದ್ದ. 30 ಕ್ಕೂ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. 
ತಮಿಳುನಾಡಿನ ಸೇಲಂ ಮೂಲದವನಾದ ಸೈಕೋ ಜಯಶಂಕರ್‌ಗೆ 36 ವರ್ಷ ವಯಸ್ಸಾಗಿದ್ದು, ಈತ  4 ಬಾರಿ ಜೈಲಿನಿಂದ ಪರಾರಿಯಾಗಿದ್ದ. 2009, 2011, 2013, 2015 ರಲ್ಲಿ ಪರಾರಿಯಾಗಿದ್ದ ಈತ ಎಸ್ಕೇಪ್ ಶಂಕರ್ ಅಂತಾನೇ ಕುಖ್ಯಾತಿ ಪಡೆದಿದ್ದ.
ತಮಿಳುನಾಡಿನಲ್ಲಿ 20 ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣದಲ್ಲಿ ಬೇಕಾಗಿದ್ದ ಈ ಸೈಕೋ ಈ ಹಿಂದೆ  ಕೊಯಮತ್ತೂರಿನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇನ್ನು ತಮಿಳುನಾಡಿನಲ್ಲಿ 11 ಮಹಿಳೆಯರು , ಕರ್ನಾಟಕದಲ್ಲಿ 4 ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಮಾಡಿದ್ದ.
ಈ ಎಲ್ಲಾ ಘಟನೆ ಹಿನ್ನೆಲೆ ಪರಪ್ಪನ ಅಗ್ರಹಾರ ಸೇರಿದ್ದ ಈತ ನಾಲ್ಕು ವರ್ಷದ ಹಿಂದೆ ಜೈಲಿನ ಗೋಡೆ ಹಾರಿ  ಪರಾರಿಯಾಗಿದ್ದ. ನಂತರ ಮೂರು ದಿನಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು.
ನಿರಂತರ ಜೈಲುವಾಸ ಮತ್ತು ಕೇಸ್‌ಗಳ ವಿಚಾರಣೆಯಿಂದಾಗಿ ಖಿನ್ನತೆಗೆ ಒಳಗಾಗಿದ್ದ ಸೈಕೋ ರೀತಿ ವರ್ತಿಸುತ್ತಿದ್ದರಿಂದ ಬೇರೆ ಕೈದಿಗಳು ಜೈಶಂಕರ್ ಬಳಿ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಅಲ್ಲದೆ, ಜೈಲಿನಲ್ಲಿ ಜೈಶಂಕರ್‌ಗೆ ಪ್ರತ್ಯೇಕ ಸೆಲ್ ನೀಡಲಾಗಿತ್ತು.

Post a Comment

Distributed by Presul Info Tech

Distributed by Gooyaabi Templates | Designed by Presul Info Tech