![]() |
ಕಳೆದ ವರ್ಷ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಪಡೆದ ಧ್ರುವ ಸರ್ಜಾ ಅಭಿನಯದ `ಭರ್ಜರಿ' ಚಿತ್ರದ ಕಲೆಕ್ಷನ್ ಸುಮಾರು 50 ಕೋಟಿಯಾಗಿರಬಹುದು ಎಂದು ಚಿತ್ರದ ನಿರ್ದೇಶಕ `ಬಹದ್ದೂರ್' ಚೇತನ್ ಹೇಳಿಕೊಂಡಿದ್ದರು. |
ಆದರೆ, ಅವೆಲ್ಲಾ ಬೋಗಸ್ . ಆ ಚಿತ್ರದಿಂದ ತಮಗೆ ಬಂದ ಲಾಭ ಕೇವಲ ಮೂರು ಕೋಟಿ ಎಂದು ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿಕೊಂಡಿದ್ದಾರೆ. ಈ ಕುರಿತು ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, `ಸಿನಿಮಾ ಗೆಲುವು ಕಂಡಿದ್ದು ನಿಜ. ನಾನು ಆ ಚಿತ್ರಕ್ಕೆ ಖರ್ಚು ಮಾಡಿದ್ದ ಹಣದ ಮೇಲೆ ಎರಡೂವರೆಯಿಂದ ಮೂರು ಕೋಟಿ ರೂ. ಲಾಭ ಬಂದಿರಬಹುದು, ಅದಕ್ಕಿಂತ ಹೆಚ್ಚು ಲಾಭ ಬಂದಿಲ್ಲ ಎಂದು ತಿಳಿಸಿದ್ದಾರೆ.
ಇಷ್ಟಕ್ಕೂ 50 ಪ್ಲಸ್ ಕೋಟಿ ಗಳಿಕೆ ಆಗಿದ್ದು ಅಂತ ಹೇಳಿದ್ದು ಯಾರು? ಚಿತ್ರದ ನಿರ್ಮಾಪಕನಾಗಿ, ಸಿನಿಮಾದ ಗಳಿಕೆ ಬಗ್ಗೆ ಹೇಳಬೇಕಾದವನು ನಾನು. ಆ ಚಿತ್ರಕ್ಕೆ ನಾನು ಹಾಕಿದ್ದು ಸುಮಾರು 17 ಕೋಟಿ ರೂ., ಗಳಿಕೆಯಾಗಿದ್ದು 21 ಕೋಟಿ . ಇದರ ಮೇಲೆ ಬ್ಯುಸಿನೆಸ್ ಆಗಿಯೇ ಇಲ್ಲ. ಎಲ್ಲಾ ಖರ್ಚು ಕಳೆದು, ಎರಡೂವರೆಯಿಂದ ಮೂರು ಕೋಟಿ ಮಾತ್ರ ಸಿಕ್ಕಿದೆ' ಎನ್ನುತ್ತಾರೆ ಅವರು.
ಚಿತ್ರದ ಲಾಭ ಮೂರು ಕೋಟಿಯಾಗಿರುವಾಗ, 50 ಕೋಟಿ ಅಂತ ಯಾಕೆ ಹೇಳಲಾಯಿತು ಎಂಬ ಪ್ರಶ್ನೆ ಬರಬಹುದು. ಈ ಕುರಿತು ಅವರನ್ನು ಕೇಳಿದರೆ, `ಕೋಟಿ ಗಳಿಕೆ ಬಗ್ಗೆ ಹೇಳಿಬಿಟ್ಟರೆ, ಅವರ ಸಂಭಾವನೆ ಹೆಚ್ಚುತ್ತೆ ಎಂಬ ಕಾರಣಕ್ಕೆ ಈ ಮಾತು ಹೇಳಿದ್ದಾರೆ. ಅವೆಲ್ಲವೂ ಸುಳ್ಳು' ಎಂದು ಸ್ಪಷ್ಟಪಡಿಸಿದ್ದಾರೆ.





Post a Comment