ಅವರೆಲ್ಲ ಜೆಮ್ಸಶೆಡಪುರದ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು. ತಮ್ಮ ಕಲಿಕೆಯೊಂದಿಗೆ ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ಹಂಬಲ ಹೊಂದಿವರು. ತಮ್ಮ ಕಾಲೇಜ್ ದಿನಗಳಿಂದಲೇ ಬಡ, ಶೋಷಿತ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ನೀಡುವತ್ತ ಗಮನಹರಿಸಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಇಂದು ಹಳೇ ವಿದ್ಯಾರ್ಥಿಗಳಾಗಿ "ಸಂಕಲ್ಪ" ಮೂಲಕ ಬುಡುಕಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಸಂಕಲ್ಪ ಹೆಸರಿನ ಅಭಿಯಾನದಲ್ಲಿ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯದಲ್ಲಿ 650ಕ್ಕಿಂತ ಹೆಚ್ಚು ಮಕ್ಕಳು ಶ್ರೀಮಂತ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.
200 ಸದಸ್ಯರಿರುವ ಹಳೇ ವಿದ್ಯಾರ್ಥಿಗಳ ಸಂಘದ ಮೂಲ ಉದ್ದೇಶವೂ ಬಡ, ಶೋಷಿತರ ಮಕ್ಕಳಿಗೆ ಶಿಕ್ಷಣ ನೀಡುವುದಾಗಿದೆ. ಅದಕ್ಕಾಗಿ ಪ್ರತಿನಿತ್ಯವೂ ತಂಡಗಳ ಮೂಲಕ ವಿದ್ಯಾರ್ಥಿಗಳು ಶಹರ, ಗ್ರಾಮಗಳಿಗೆ ತೆರಳಿ ಬುಡಕಟ್ಟು ಜನರ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲೆಗೆ ಸೇರಿಸಿ, ಅವರ ಕಲಿಕೆ ಖರ್ಚನ್ನು ಭರಿಸುತ್ತಿದ್ದಾರೆ.
ಇನ್ನು ದೊಡ್ಡ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಜರುಗುವ ಪ್ರವೇಶ ಪರೀಕ್ಷೆಗಳಿಗೆ ಬುಡಕಟ್ಟು ಮಕ್ಕಳನ್ನು ಸಿದ್ಧಪಡಿಸುವ ಕೆಲಸವನ್ನು ಸಂಕಲ್ಪ ಮೂಲಕ ಮಾಡಲಾಗುತ್ತಿದೆ. ಪರಿಣಾಮ ಇದುವರೆಗೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಶ್ರೀಮಂತ ಮಕ್ಕಳನ್ನು ಮೀರಿಸುವ ಸಾಧನೆ ಮಾಡಿದ್ದಾರೆ. ಸಣ್ಣ ಮನೆಯಲ್ಲಿದ್ದುಕೊಂಡೇ ಬೃಹತ್ ಕಟ್ಟಡದ ಶಾಲೆ ವಿದ್ಯಾರ್ಥಿಗಳಾಗಿರುವ ಬುಡುಕಟ್ಟು ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ.
'ಸಂಕಲ್ಪ'ದ ಹುಟ್ಟು:
ಜೆಮ್ಸಶೆರಪುರದ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದ ಕೆಲ ವಿದ್ಯಾರ್ಥಿಗಳು ಊಟಕ್ಕೆಂದು ಮೆಸ್ ಗೆ ತೆರಳುತ್ತಿದ್ದರು. ಈ ವೇಳೆ ಅಲ್ಲಿ ಅಡುಗೆ ಮಾಡುತ್ತಿದ್ದವರ ಮಕ್ಕಳು ಶಾಲೆ ಹೋಗದಿರುವುದು ಗೊತ್ತಾಗಿತ್ತು. ಅದನ್ನು ತಿಳಿದ ವಿದ್ಯಾರ್ಥಿಗಳು ತಾವೇ ಆ ಮಕ್ಕಳಿಗೆ ಪ್ರತಿನಿತ್ಯ ಕೆಲಕಾಲ ಪಾಠ ಹೇಳಲು ಆರಂಭಿಸಿದರು. ಬಹುತೇಕ ವಿದ್ಯಾರ್ಥಿಗಳು ಅದಕ್ಕೆ ಸಾಥ್ ನೀಡಿದರು.
ಎಲ್ಲರೂ ಕಾಲೇಜ್ ದಿನ ಮುಗಿಸಿ ವೃತ್ತಿಯಲ್ಲಿ ತೊಡಗಿಸಿಕೊಂಡರು. ಆಗ ಪ್ರತಿಯೊಬ್ಬರು ಬಡಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಯೋಚಿಸಿ 2007ಲ್ಲಿ ಳೇ ವಿದ್ಯಾರ್ಥಿಗಳ ಸಂಘ ಕಟ್ಟಿಕೊಂಡರು. ಅದೇ ಸಂಘದ ಮೂಲಕ ಇಂದು ನೂರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ವಿದ್ಯಾರ್ಥಿಗಳು, ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸುವ ಇಚ್ಛೆ ಹೊಂದಿದೆ.
ಆರಂಭದಲ್ಲಿ ಕಷ್ಟವಾಗಿತ್ತು:
"ಸಂಕಲ್ಪ"ದ ಉದ್ದೇಶ ಬಿಚ್ಚಿಟ್ಟ ಹಳೇ ವಿದ್ಯಾರ್ಥಿ ಶ್ರೀವಾಸ್ತವ, ಗ್ರಾಮೀಣ ಹಾಗೂ ಬುಡುಕಟ್ಟು ಜನರಲ್ಲಿ ಮೊದಲು ಶಿಕ್ಷಣದ ಜಾಗೃತಿ ಮೂಡಿಸಬೇಕು. ಬಳಿಕ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ಇಡೀ ಸಮಾಜ ಮುಖ್ಯವೇದಿಕೆಗೆ ಬರುತ್ತದೆ. ಅದೇ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳೆಲ್ಲರೂ ಕೊಡಿಕೊಂಡು ಸಂಕಲ್ಪ ಕಟ್ಟಿದ್ದೇವೆ. 650ಕ್ಕೂ ಹೆಚ್ಚು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಇನ್ನು ನೂರಾರು ಮಕ್ಕಳನ್ನು ನಾವು ತಲುಪಬೇಕಿದೆ' ಎಂದರು.
ಅಮರ ಪ್ರತಾಪ ಸಿಂಗ್ ಯಶೋಗಾಥೆ:
'ಸಂಕಲ್ಪ' ಅಭಿಯಾನಕ್ಕೆ ಅಮರ ಪ್ರತಾಪ್ ಸಿಂಗ್ ಎಂಬ ಬಾಲಕನ ಯಶೋಗಾಥೆಯೇ ಸಾಕ್ಷಿಯಾಗಿದೆ. 2007ರಲ್ಲಿ ಸಂಕಲ್ಪದ ಮೊದಲ ಬ್ಯಾಚ್ನಲ್ಲಿದ್ದ ಅಮರ ಸದ್ಯ 11ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಪ್ರತಿನಿತ್ಯ ಕೆಲಸ ಮಾಡುತ್ತಲೇ ಕಾಲೇಜ್ಗೆ ಹೋಗುವ ಅಮರ, ತನಗೆ ದೊರೆತ ಸಮಯವನ್ನು ಬಳಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಹೊರಟಿದ್ದಾನೆ. ಆತನ ಬೆನ್ನಿಗೆ ಸಂಕಲ್ಪವಿದ್ದು, ಆತನ ಕುರಿತು ಸಾಕ್ಷ್ಯಚಿತ್ರವೊಂದು ಈಗಾಗಲೇ ಬಿಡುಗಡೆಯಾಗಿದೆ.
ಇದು ಕೇವಲ ಅಮರ ಕಥೆಯಲ್ಲ. ನೂರಾರು ವಿದ್ಯಾರ್ಥಿಗಳು ಸಮಾಜದ ಮುಖ್ಯ ವೇದಿಕೆಗೆ ಬರುತ್ತಿದ್ದಾರೆ. ಅವರನ್ನು ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುವಂತೆ ಮಾಡುತ್ತಿರುವ ಸಂಕಲ್ಪದ ಹಳೇ ವಿದ್ಯಾರ್ಥಿಗಳಿಗೆ ನಮ್ಮದೊಂದು ಸೆಲ್ಯೂಟ್ ಇರಲಿ..
------
ಅಮರ ಸಿಂಗ್ ಕುರಿತ ಸಾಕ್ಷ್ಯಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.






Post a Comment