ಜಲಸಂಪತ್ತಿನ ಸಮರ್ಥ ಬಳಕೆ: ಬೊಮ್ಮಾಯಿ ಹೆಗ್ಗಳಿಕೆ


ನೀರಾವರಿ ಕೃಷಿಯ ಅವಿಭಾಜ್ಯ ಅಂಗ. ಅನ್ನದಾತನ ಜಮೀನಿಗೆ ನೀರುಣಿಸುವ ಕನಸು ಕಂಡವರು ನಮ್ಮ ಮಧ್ಯೆ ಅನೇಕರು. ಆದರೆ ಅದನ್ನು ನನಸಾಗಿಸಿದವರು ಎಲ್ಲೋ ಒಬ್ಬಿಬ್ಬರು. ಇಂಥವರ ಪಟ್ಟಿಯಲ್ಲಿ ಬರುವವರು ಜನಾನುರಾಗಿ ರಾಜಕಾರಣಿ ಬಸವರಾಜ ಬೊಮ್ಮಾಯಿಯವರು.ಜಲಸಂಪತ್ತಿನ ಸಮರ್ಥ ಬಳಕೆ ಪರಿಕಲ್ಪನೆ ಇರೋದು ಬೊಮ್ಮಾಯಿಯವರ ಹೆಗ್ಗಳಿಕೆ. ಕೃಷಿ ಮತ್ತು ನೀರಾವರಿ ಬಗ್ಗೆ ತಮ್ಮದೇ ಆದ ವಿಶಿಷ್ಟ ದೂರದೃಷ್ಟಿ ಹೊಂದಿರುವ ಇವರ ಇಚ್ಛಾಶಕ್ತಿಯ ಪ್ರತೀಕವಾಗಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ತುಂತುರು ನೀರಾವರಿ ಯೋಜನೆಯಾಗಿದೆ. ಆ ಮೂಲಕ ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಬೊಮ್ಮಾಯಿಯವರು ಈ ಒಂದು ಮಹಾತ್ವಾಕಾಂಕ್ಷೆ ಯೋಜನೆ ಜಾರಿ ತರುವ ಮೂಲಕ ಕೃಷಿಕನ ನೆರವಿಗೆ ಮುಂದಾಗಿದ್ದು ವಿಶೇಷ. ರೈತಾಪಿ ವರ್ಗದ ಬದುಕನ್ನು ಹಸನಾಗಿಸುವ ಕನಸು ಕಂಡ ಬಸವರಾಜ ಅವರು ನೀರಾವರಿ ವ್ಯಾಪ್ತಿ ವಿಸ್ತರಿಸಿದವರು. ಸಮಗ್ರ ಸೂಕ್ಷ್ಮ ನೀರಾವರಿ ವ್ಯವಸ್ಥೆ ಮೂಲಕ ರೈತನ ಹೊಲಕ್ಕೆ ನೀರು ಹರಿಸಿದ ಭಗೀರಥ ಇವರು. ದೇಶದಲ್ಲಿ ಪ್ರಥಮ ಅನುಷ್ಠಾನ ಯೋಜನೆಗೆ ಭಾಜನವಾದ ಶಿಗ್ಗಾವಿ ತುಂತುರು ನೀರಾವರಿ ಯೋಜನೆ ಸಮರ್ಪಣೆಯಿಂದ ಶಿಗ್ಗಾವಿ -ಸವಣೂರ ಮತ್ತು ಹಾನಗಲ್ಲ ತಾಲೂಕಿನ ಸುಮಾರು 25ಸಾವಿರ ಎಕರೆ ಪ್ರದೇಶಕ್ಕೊಳಪಟ್ಟ ರೈತರ ಭೂಮಿಗೆ 'ಹಸಿರು ಸೀರೆ ಉಡಿಸುವಲ್ಲಿ ಬೊಮ್ಮಾಯಿಯವರು ಯಶಸ್ವಿಯಾಗಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯೊಂದಿಗೆ ಬರಗಾಲ ಎದುರಿಸುತ್ತಿದ್ದ ಕ್ಷೇತ್ರದ ರೈತರು, ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕೊಡಿ ಎಂದು ಮನವಿ ಮಾಡಿರಲಿಲ್ಲ. ಆದರೆ, ಈಕ್ಷೇತ್ರದಲ್ಲಿ ಹರಿದು ಹೋಗುತ್ತಿರುವ ವರದಾ ನದಿ ನೀರು ತಡೆದು ನೀರಾವರಿ ವ್ಯವಸ್ಥೆ ಕಲ್ಪಿಸುವ ದೂರುದೃಷ್ಟಿ ಚಿಂತನೆ ಬಸವರಾಜ ಬೊಮ್ಮಾಯಿ ಅವರದ್ದಾಗಿತ್ತು. ಇದಕ್ಕೆ ಪೂರಕವಾಗಿ ಸಚಿವರಾದ ಮೇಲೆ ಒಂದೇ ವರ್ಷದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮೊದಲು ಸಾಧನೆಗೆ ಹೆಜ್ಜೆ ಹಾಕಿದ ಬೊಮ್ಮಾಯಿ,ಪ್ರಥಮ ಹಂತದ 239 ಕೋಟಿ ರೂ.ವೆಚ್ಚ ಯೋಜನೆಗೆ ವಿನಿಯೋಗಿಸಿದರು.ಅಧಿಕಾರ ಪೂರ್ಣಗೊಳ್ಳುತ್ತಿದ್ದಂತೆ ಯೋಜನೆ ರೈತರಿಗೆ ಸಮರ್ಪಿಸಿ, ನುಡಿದಂತೆ ಭೂ-ತಾಯಿಗೆ ತಾಯಿಗೆ ಹಸಿರು ಸೀರೆ ಉಡಿಸಿದರು. ಇದು ರೈತರಲ್ಲಿ ಹರ್ಷ ಮೂಡಿಸಿದ್ದಲ್ಲದೇ, ಇದೇ ವರ್ಷದಲ್ಲಿ ಬತ್ತಿ ಹೋಗುತ್ತಿದ್ದ ಬೆಳೆಗೆ ರೈತರು ಯೋಜನೆ ನೀರನ್ನು ಬಳಿಸಿಕೊಂಡು ಬೆಳೆ ಪಡೆದಿರುವ ಸಂಗತಿ ಮನೆ ಮನದಲ್ಲಿ ಬೇರೂರಿತು. ನೀರಾವರಿ ಯೋಜನೆ ಅನುಷ್ಠಾನದಿಂದ ವ್ಯವಾಹಾರದ ವಹಿವಾಟು ಹೆಚ್ಚಿಸಿಕೊಂಡ ಶಿಗ್ಗಾವಿ-ಸವಣೂರ ಮತ್ತು ಬಂಕಾಪುರ ಪಟ್ಟಣಗಳು ನಗರ ಪ್ರದೇಶ ಮೀರಿಸುವಂತಾಗಿದೆ. ಗಗನಕ್ಕೇರಿದ ಭೂಮಿ ಬೆಲೆ... ಭೂಮಿ ಕೊಡುವರಿದ್ದರೂ, ಖರೀದಿಸುವರಿಲ್ಲದಂತಾಗಿದ್ದ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಅನುಷ್ಠಾನದ ಸದ್ದು ಕೇಳಿ ಕೊಡಲು ಮಾರಾಟಕ್ಕೆ ಮುಂದಾ ದವರು ದಿಡೀರ ಸ್ಥಗಿತಗೊಳಿಸಿದರು. ಯೋಜನೆ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆ ಭೂಮಿ ದರ ಗಗನಕ್ಕೇರಿ ಖರೀದಿಸುವವರಿಗೆ ಅಚ್ಚರಿ ಮೂಡಿಸಿದ್ದು ಸ್ಮರಿಸಬಹುದು. ಯೋಜನೆ ಕಿರು ಪರಿಚಿಯ.... ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿರುವ ವರದಾ-ಧರ್ಮಾ ನದಿಗಳಲ್ಲಿ ಮಳೆಗಾಲದ ದಿನದಲ್ಲಿ ಹರಿಯವ ನೀರನ್ನು ರೈತರ ಭೂಮಿಗೆ ಹರಿಸಿ ನೀರಾವರಿಗೊಳ ಪಡಿಸುವುದೇ ಯೋಜನೆ ಉದ್ದೇಶ. ನದಿಗಳು ಸೇರುವ ಸ್ಥಳದ ಕೆಳಗಡೆ ಸುಮಾರು 4ನೂರು ಮೀ.ದೂರದಲ್ಲಿ ಹಲಸೂರ ಗ್ರಾಮದ ಹತ್ತಿರ 'ಡೈವರ್ಶನ ವಿಯರ್' 1.50 ಟಿಎಂಸಿ ನೀರು (ಸಂಗ್ರಹಹಾರ) ಸ್ಥಾಪಿಸಲಾಗಿದೆ. ದೈವರ್ಶನ ವಿಯರ್‍ನಲ್ಲಿ ಸಂಗ್ರಹವಾಗುವ 1.35ಟಿಎಂಸಿ ನೀರನ್ನು ಮಾತ್ರ ಏತ ನೀರಾವರಿಗೆ ಬಳಿಸಿಕೊಳ್ಳಲಾಗುತ್ತದೆ.ಸಂಗ್ರಹ ನೀರನ್ನು ಇಂಟಿಕ್ ಕೆನಾಲ್ ಜಾಕ್‍ವೆಲ್-ಕಂ ಪಂಪಹೌಸ್‍ನಿಂದ ಡೆಲಿವರಿ ಚೇಂಬರ್ಸ ಮೂಲಕ ರೈತರ ಹೊಲಗಳಲ್ಲಿ ಸ್ಥಾಪಿತಗೊಂಡ ಸಂಪುಗಳಿಗೆ ಪೈಪ್‍ಲೈನ್‍ನಿಂದ ನೀರು ಸಂಗ್ರಹ ವಾಗುತ್ತದೆ. ಸಂಪ್‍ನಲ್ಲಿ ಸಂಗ್ರಹವಾದ 1.35 ಟಿಎಂಸಿ ನೀರಿನಿಂದ ರೈತರ ಭೂಮಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಬಾರದ ಸಂದರ್ಭದಲ್ಲಿ ಅಚ್ಚು ಕಟ್ಟು ಪ್ರದೇಶದಲ್ಲಿ ಬರುವ ಐದು ಸಣ್ಣ ಕೆರೆಗಳಿಗೂ ನೀರು ಬಿಟ್ಟು ಭೂಮಿಗಳಲ್ಲಿರುವ ಬೆಳೆಗಳಿಗೆ ನೀರುಣಿಸುವ ಉದ್ದೇಶಿತ ಈ ಯೋಜನೆಯಡಿ 0.15 ಟಿಎಂಸಿ ನೀರನ್ನು ಬಳಿಕೆ ಮಾಡಿಕೊಳ್ಳಲಾಗುತ್ತದೆ. ಯೋಜನೆ ನಿರ್ವಹಣೆ.... ವರದಾ ನದಿ ಪಾತ್ರದಲ್ಲಿ ಉಂಟಾಗುವ ಮಳೆಗಾಲದ ಪ್ರವಾಹದ ನೀರನ್ನು ಉಪಯೋಗಿಸಿಕೊಳ್ಳಲು ಈಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವರದಾ ನದಿಯಿಂದ ನೀರನ್ನು 6.135 ಕ್ಲೈಮೆಕ್ಸ್ ಬಿಡುಗಡೆ ಪ್ರಮಾಣದಲ್ಲಿ 2000 ಮೀ.ಮಿ - 1200 ಮೀ.ಮಿ. ವ್ಯಾಸದ 11.6 ಕಿ.ಮೀ.ಉದ್ದದ ರೈಸಿಂಗ್ ಮೇನ್ ಮೂಲಕ 6ಡೆಲಿವರಿ ಚೇಂಬರ್ ಸಾಗಿಸಲಾಗುತ್ತಿದೆ. ಡೆಲಿವರಿ ಚೇಂಬರ್‍ಗಳಿಂದ ಗುರುತ್ವಾಕರ್ಷಣೆ ಬಲ ಉಪಯೋಗಿಸಿ ಹೆಚ್‍ಡಿಪಿಇ/ವಿವಿಸಿ ಫೀಡರ್ ಲೈನ್‍ಗಳ ಮೂಲಕ ನೀರು ಸಂಗ್ರಹಣಾ ತೊಟ್ಟಿಗಳಿಗೆ ಸಾಗಿಸಲಾಗುತ್ತದೆ. ಡೆಲಿವರಿ ಚೇಂಬರಿಗೆ ತಲುಪಿದ ನೀರನ್ನು ಪಿವಿಸಿ/ಹೆಚ್‍ಡಿಪಿಇ ಪೈಪ್‍ಗಳ ಮೂಲಕ ನೀರಿನ ತೊಟ್ಟಿಗಳಿಗೆ ತಲುಪಿಸಲಾಗುತ್ತದೆ.ಡೆಲಿವರಿ ಚೇಂಬರಿನಿಂದ ನೀರನ್ನು ಭೂಪ್ರದೇಶದಲ್ಲಿ ಲಭ್ಯವಿರುವ ಗುರುತ್ವಾಕರ್ಷಣೆ ಬಲವನ್ನು ಉಪಯೋಗಿಸಿಕೊಂಡು ಸಾಗಿಸಲಾಗುತ್ತದೆ. ಡೆಲಿವರಿಂದ ಚೇಂಬರ್‍ಗಳಲ್ಲಿ ಯಾವುದೆ ಪಂಪ್‍ನ್ನು ಬಳಸುವುದಿಲ್ಲ.ಇದರಿಂದ ವಿತರಣಾ ಜಾಲವನ್ನು ಗುರುತ್ವಾಕರ್ಷಣೆ ನೀರಿನ ವಿತರಣಾ ಜಾಲ ಎಂದು ಕರೆಯಲಾಗುತ್ತಿದೆ. ಈಜಾಲದಲ್ಲಿ ಉಪಯೋಗಿಸುವ ಪೈಪುಗಳು ವ್ಯಾಸ 160 ಮಿಮಿನಿಂದ 1600 ಮಿಮಿಗಳ ಒಳಗೆ ಇರುತ್ತದೆ. ಈ ಜಾಲದಲ್ಲಿ ನೀರಿನ ಹರಿವು ಮತ್ತು ಒತ್ತಡವನ್ನು ನಿಯಂತ್ರಿಸಲು ಸೂಕ್ತ ಸ್ಥಳದಲ್ಲಿ ಬಟರ್‍ಪ್ಲೈ ಹಾಗೂ ಏರ್ ರಿಲೀಸ್ ವಾಲ್ವ್ಸ್‍ಗಳನ್ನು ಒದಗಿಸಲಾಗಿದೆ. ಪ್ರತಿ 295ರಿಂದ 210 ಎಕರೆ ಪ್ರದೇಶಕ್ಕೆ ಒಂದು ನೀರಿನ ತೊಟ್ಟಿಯನ್ನು ಕಟ್ಟಲಾಗಿದೆ. ಅಚ್ಚುಕಟ್ಟು ಪ್ರದೇಶದ 24,463 ಎಕರೆ ಪ್ರದೇಶಕ್ಕೆ 119 ನೀರಿನ ತೊಟ್ಟಿಗಳನ್ನು ಕಟ್ಟಲಾಗಿದೆ. ಪ್ರತಿ ನೀರಿನ ತೊಟ್ಟಿಯ ಸಾಮಾಥ್ರ್ಯ 205.5. ಕ್ಯುಬಿಕ್ ಮೀಟರ್‍ಗಳಾಗಿರುತ್ತದೆ. ಸಂಗ್ರಹಣಾ ತೊಟ್ಟಿಗಳಿಂದ ನೀರನ್ನು ಪಂಪ್‍ಸೆಟ್ಟುಗಳು ಮುಖಂಆತರ ಎತ್ತಿ, ಸೂಕ್ಷ್ಮ ನೀರಾವರಿ ವ್ಯವಸ್ಥೆಯ ಮೂಲಕ ಬೆಳೆಗಳಿಗೆ ನೀಡಲಾಗುತ್ತದೆ. 14 ಮಿಮಿ ನೀರನ್ನು ಪ್ರತಿ ಹೊಲಕ್ಕೆ ನಾಲ್ಕು ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಪ್ರತಿ ಎಕರೆಗೆ ಕನಿಷ್ಠ 1ಕೊಳಾಯಿ (ಹೈಡ್ರಂಟ್)ಯನ್ನು ನೀಡಲಾಗಿದೆ. ಒಟ್ಟು ಅಚ್ಚುಕಟ್ಟು (ಹೈಡ್ರಂಟ್)ಗಳನ್ನು ಕಲ್ಪಿಸ ಲಾಗಿದೆ. ಯೋಜನೆ ಲಾಭ ಪಡೆಯವ ಗ್ರಾಮಗಳು.... ಕುಂದೂರು, ಹಳೇಬಂಕಾಪುರ, ಬಾಡ, ಚಿಕ್ಕನೆಲ್ಲೂರ, ಬಂಕಾಪುರ, ಮೂಕಬಸರೀಕಟ್ಟಿ, ಕಲ್ಯಾಣ, ಚಾಕಾಪುರ, ಮುನವಳ್ಳಿ, ಸದಾಶಿವಪೇಟೆ, ಹೊಟ್ಟೂರ, ಗುಡ್ಡದ ಚನ್ನಾಪುರ, ನಾರಾಯಣಪುರ, ಬಿಸನಳ್ಳಿ ಒಟ್ಟು 14 ಗ್ರಾಮಗಳು ಶಿಗ್ಗಾವಿ ತಾಲೂಕಿಗೆ ಸೇರಿವೆ. ಕುಣಿಮೆಳ್ಳಿಹಳ್ಳಿ, ಹಲಸೂರ, ತವರುಮೆಳ್ಳಿಹಳ್ಳಿ, ಬರ ದೂರ, ಸವೂರು, ಫಕ್ಕೀರನಂದಿಹಳ್ಳಿ, ಮಣ್ಣೂರ, ಕಲ್ಮಡು 8 ಗ್ರಾಮಗಳು ಸವಣೂರ ತಾಲೂಕಿಗೆ ಸೇರಿದರೇ, ಹಾನಗಲ್ಲ ತಾಲೂಕಿನ ಹರನಗೇರಿ, ಅಲ್ಲಾಪುರ, ನೀರಲಗಿ, ಮಾಸನಕಟ್ಟಿ, ಬಿಂಗಾಪುರ, ಂಬಳ, ಮಾರನಬೀಡ, ಹರವಿ ಎಂಟು ಗ್ರಾಮಗಳು ಸೇರಿದಂತೆ 30ಗ್ರಾಮಗಳಲ್ಲಿನ 9900 ಹೆಕ್ಟೇರ್ ಪ್ರದೇಶದ (25ಸಾವಿರ) ಎಕರೆ ಭೂಮಿ ನೀರಾವರಿಗೊಳಪಡಲ್ಲಿವೆ. ಶಿಗ್ಗಾವಿ ಏತ ನೀರಾವರಿ ಯೋಜನೆ, 'ಜಲ ಜೀವಿಗಳ ಜೀವಾಳ' ಬೇಸಿಗೆ ಕಾಲ ಬಂತೆಂದರೆ ಪ್ರಥಮ ಆಧ್ಯತೆ ನೀರಿಗೆ.ಜಲ ಸಕಲ ಜೀವಿಗಳ (ಮನುಷ್ಯ, ಪ್ರಾಣಿ ಸಸ್ಯೆಗಳಿಗೆ) ಜೀವಾಳವೇ ಸರಿ. ಇದಕ್ಕೆ ಪೂರಕ ಅನುಷ್ಠಾನ ಶಿಗ್ಗಾವಿ ಏತ ನೀರಾವರಿ ಯೋಜನೆ. ಶಿಗ್ಗಾವಿ-ಸವಣೂರ ಮತ್ತು ಬಂಕಾಪುರ ಪಟ್ಟಣಗಳು ದಶಕಗಳಿಂದ ನೀರಿಗಾಗಿ ಬವÀಣೆ ಎದುರಿಸಿವೆ. ಸಕಲ ಜೀವಿಗಳಿಗೆ ಶುದ್ಧ ಕುಡಿಯವ ನೀರು ಕನಸಿನ ಮಾತಾಗಿತ್ತು.ಈ ಯೋಜನೆ ಅನುಷ್ಠಾನದಿಂದ ತಪ್ಪಿದೆ. ಮುಂದಿಯೂ ಶಾಶ್ವತ ಪರಿಹಾರ ನೀಡಿದೆ. ಕಳೆದ ಮೂರಾನಾಲ್ಕು ವರ್ಷದಲ್ಲಿ ಈಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ಬೊಮ್ಮಾಯಿ ಶ್ರಮ ಸಾರ್ಥಕವಾಗಿದೆÀ. ಉದಾರಹಣೆಯಾಗಿ ವರದಾ ನದಿ ನೀರು ಅವಲಂಬಿತ ಈಯೋಜನೆಯಡಿ ಪೈಪ್‍ಲೈನ್ ಮೂಲಕ ಶಿಗ್ಗಾವಿ ಪಟ್ಟಣದ ಐತಿಹಾಸಿಕ ನಾಗ ನೂರು ಕೆರೆಗೆ ನೀರು ಹರಿಸಿ ಅಲ್ಲಿಂದ ಶುದ್ದೀಕರಿಸಿದ ನೀರನ್ನು ಪಟ್ಟಣದ ನಾಗಕರಿಕರಿಗೆ ಕುಡಿಯಲು ನೀಡಲಾಗಿದೆ. ಸವಣೂರ ಪಟ್ಟಣಕ್ಕಂತು ಈಗಾಗಲೇ ಇದೇ ಯೋಜನೆಯಡಿ ನೀರನ್ನು ಪೂರೈಕೆ ಮಾಡಲಾಗುತ್ತದೆ. ಇದರಿಂದ ನೀರಿಗಾಗಿ ಪರದಾಡುತ್ತಿದ್ದ ನಾಗರಿಕರು ನೆಮ್ಮದಿ ಕಂಡಿದ್ದಾರೆ. ಇನ್ನು ಶಿಗ್ಗಾವಿ-ಸವಣೂರ ತಾಲೂಕಿನ ರೈತರು ಸಾವಿರಾರು ವರ್ಷಗಳಿಂದ ಮಳೆಯನ್ನೇ ಆಶ್ರಯಿಸಿ ತಮ್ಮ ಹೊಲದಲ್ಲಿ ಒಂದೇ ಬೆಳೆ ಪಡೆದುಕೊಳ್ಳುತ್ತಿದ್ದರು. ಅದು ಕೆಲವೊಮ್ಮೆ ಮಳೆ ಕೈಕೊಟ್ಟರೆ ರೈತರು ಆತ್ಮಹತ್ಯೆಗೂ ಮುಂದಾಗುತ್ತಿದ್ದನ್ನು ಕಣ್ಣಾರೆ ಕಾಣುತ್ತಿದ್ದೇವೆ.ರೈತ ಸುಖವಾಗಿದ್ದರೆ ಸಮುದಾಯ ಸಮೃದ್ಧಿಯಿಂದ ಬದುಕಲು ಸಾಧ್ಯ. ನೀರು ಭೂಮಿಗೆ ಜೀವಾಳ ನೀರಿಲ್ಲದೇ ಬೆಳೆ ಬಾರದು. ಕೇವಲ ವರದಾ ನದಿಯಿಂದ ನೀರಾವರಿ,ಕುಡಿಯಲು ನೀರು ಶಾಶ್ವತ ಪೂರೈಸಲು ಯೋಜನೆಯಾಗಿದ್ದರೂ,ಬೇಸಿಗೆಯಲ್ಲಿ ನದಿ ಬತ್ತಿ ಹೋದರೆ ನದಿ ನೀರಲ್ಲಿದೇ ಅವಲಂಬಿತರು ಕೊರಗಬಾರದು. ಈನಿಟ್ಟಿನಲ್ಲಿ ಬೇರೊಂದು ನದಿ ಜೋಡಣೆ ಕಾರ್ಯವನ್ನು ಬೊಮ್ಮಾಯಿ ಮಾಡಿದಲ್ಲಿ ನೆನಪು ರೈತನ ಮನ ದಲ್ಲಿ ಹಸಿರಾಗಿರುತ್ತದೆ. ನೀರಾವರಿ ಯೋಜನೆಯಿಂದ ವರ್ಷಕ್ಕೆ ಮೂರು ಬೆಳೆ ಪಡೆಯವ ತವಕದಲ್ಲಿರುವ ರೈತರಿಗೆ ಸಹಾಯ ಮಾಡಿದ ಬೊಮ್ಮಾಯಿ ಅವರ ಕಾರ್ಯವೈಖರಿ ಉಳಿದ ರಾಜಕಾರಣಿಗಳಿಗೆ ಮಾದರಿಯಾಗಿದೆ.



Post a Comment