ಶ್ರುತಿ ಹರಿಹರನ್ ಈ ವಿಷಯದ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಈಗ ಪುನಃ ಅವರು ಆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುವುದರ ಜೊತೆಗೆ, ಅಂದು ತಾವು ಮಾತಾಡಿದ್ದು ಏನು ಎಂದು ಸ್ಪಷ್ಟಪಡಿಸಿದ್ದಾರೆ. `ಅಂದು ನಾನು ಮಾತನಾಡಿದ್ದನ್ನು ರೋಚಕವಾಗಿ ತೋರಿಸಲಾಯಿತೇ ಹೊರತು, ಗಂಭೀರವಾಗಿ ಪರಿಗಣಿಸಲಾಗಲಿಲ್ಲ. ಅಂದು ಆ ವೇದಿಕೆಯಲ್ಲಿ ಎಷ್ಟೋ ವಿಷಯಗಳ ಬಗ್ಗೆ ಚರ್ಚೆಯಾಗಿತ್ತು. ಆದರೆ, ಇದೊಂದೇ ವಿಷಯವನ್ನಿಟ್ಟುಕೊಂಡು ಸುದ್ದಿ ಮಾಡಲಾಯಿತು.
ನಾನು ಹೇಳಿದ್ದು, ಐದು ವರ್ಷಗಳ ಹಿಂದೆ ನನಗೆ ಇಂಥದ್ದೊಂದು ಅನುಭವವಾಗಿದೆ ಎಂದು. ಈಗ ಅವೆಲ್ಲಾ ಬಹಳ ಕಡಿಮೆಯಾಗಿದೆ. ತುಂಬಾ ನಟಿಯರಿಗೆ ಇಂತಹ ಅನುಭವಗಳೇ ಆಗಿಲ್ಲ. ಇನ್ನು ನಾನು ಈ ಮಾತು ಹೇಳುವುದಕ್ಕೂ ಕಾರಣವಿದೆ. ಇನ್ನಾದರೂ ನಾವು ಈ ಬಗ್ಗೆ ಪ್ರಶ್ನೆ ಎತ್ತಬೇಕು. ಜೊತೆಗೆ, ಒಂದು ಪಾತ್ರ ಗಿಟ್ಟಿಸುವುದಕ್ಕೆ ಅವೆಲ್ಲಾ ಒಪ್ಪುವ ಅಗತ್ಯ ಇಲ್ಲವೆಂದು ನಾಲ್ಕು ಜನರಿಗೆ ಅರ್ಥವಾಗಬೇಕು. ಆ ನಿಟ್ಟಿನಲ್ಲಿ ನಾನು ಹೇಳಿದ್ದೆ. ಆದರೆ, ಅದು ಇಷ್ಟೊಂದು ಚರ್ಚೆಯಾಗಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ' ಎನ್ನುತ್ತಾರೆ ಶ್ರುತಿ.




Post a Comment